ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು

ವಿಕಿಪೀಡಿಯ ಇಂದ
(ಸಹಾಯ:Starting a new page ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹೊಸ ಲೇಖನವನ್ನು ಪ್ರಾರಂಭ ಮಾಡುವ ಮುನ್ನ ಆ ವಿಷಯದ ಬಗ್ಗೆ ಈಗಾಗಲೇ ವಿಕಿಪೀಡಿಯದಲ್ಲಿ ಲೇಖನ ಇಲ್ಲವೆಂಬುದನ್ನು ಖಾತರಿ ಪಡಿಸಿಕೊಳ್ಳಿ. ವಿಕಿಪೀಡಿಯದ ಸರ್ಚ್ (ನಿಮ್ಮ ಎಡಕ್ಕಿರುವ ಮೆನು, ಸೈಡ್ ಬಾರ್ ನೋಡಿ) ವ್ಯವಸ್ಥೆ ಬಳಸಿ ನೀವು ಪ್ರಾರಂಭಿಸಬೇಕೆಂದಿರುವ ಲೇಖನ ವಿಷಯವನ್ನು ಹುಡುಕಿ ನೋಡಿ.

ಹುಡುಕುವಾಗ (ಸರ್ಚ್) ನೆನಪಿಟ್ಟುಕೊಳ್ಳಬೇಕಾದ ವಿಷಯಗಳು[ಬದಲಾಯಿಸಿ]

ಹುಡುಕುವಾಗ (ಸರ್ಚ್) ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಹುಡುಕಿ ನೋಡಿ. ಉದಾಹರಣೆಗೆ ನಾಗಲ್ಯಾಂಡ್ ಮತ್ತು ನಾಗಲ್ಯಂಡ್, ನಾಗಾಲ್ಯಾಂಡ್.

ಹೊಸ ಲೇಖನವನ್ನು ಪ್ರಾರಂಭಿಸುವುದು[ಬದಲಾಯಿಸಿ]

  • ವಿಧಾನ ೧: ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ಕೋಗಿಲೆ ಎಂಬ ಲೇಖನ ಸೇರಿಸಬೇಕಿದ್ದರೆ http://kn.wikipedia.org/wiki/ಕೋಗಿಲೆ ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
  • ವಿಧಾನ ೨: 'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, "ಲೇಖನದ ಹೆಸರು ಪುಟವನ್ನು ಈ ವಿಕಿಯಲ್ಲಿ ಸೃಷ್ಟಿಸಿ!" ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.