www.fgks.org   »   [go: up one dir, main page]

ಕೇಜ್ರಿವಾಲ್ ನಿಜವಾಗಿಯೂ  Feb 15, 2014

ಡಿಫರೆಂಟ್ ಲೀಡರ್ರಾ?

ನಾಯಕನಾಗುವುದು ಹೇಗೆ ಎಂಬುದಕ್ಕೆ'ಕೇಜ್ರಿವಾಲ್ ಸ್ಟೈಲ್'ನಲ್ಲಿ ಸುದೀರ್ಘಕಾಲ ಬಾಳಿಕೆ ಬರುವ ತಂತ್ರಗಳಿವೆ ಅವುಗಳನ್ನೊಮ್ಮೆ ನೋಡಿ...

2 ಮಹಾಯುದ್ಧ &  Feb 15, 2014

3 ಗೂಢಚಾರಿಣಿಯರು

ಇಲ್ಲಿ ಹೇಳಹೊರಟಿರುವುದು ಮಹಾಯುದ್ಧ ಸೃಷ್ಟಿಸಿದ ಮೂವರು ಅಸಲಿ ಬಾಂಡ್ ಗರ್ಲ್ ಗಳ ಕತೆ. ಕಠಿಣ ಸಂದರ್ಭಗಳಲ್ಲಿ ಹೆಗಲುಕೊಟ್ಟು ಗಂಡಸರೂ ನಾಚುವಂತೆ ಸಾಹಸ ಪ್ರದರ್ಶಿಸಿದ ಚಾಲಾಕಿ ಮಹಿಳೆಯರ ಕತೆ. ಪರಿಸ್ಥಿತಿಯ ಕೈಗೊಂಬೆಯಾಗಿ ಏನೇನೋ ಆಗಿ ಹೋದವರು ಕತೆ!

ಒಂಟಿಬುಡಕ  Feb 15, 2014

ತಿಂದವರೆಲ್ಲ ಜಾಣರಲ್ಲ

ನಮ್ಕಡೆ ಒಂದು ಪದ ಇದೆ 'ಒಂಟಿಬುಡುಕ' ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ.

ಡಾಕ್ಟರ್ ಮೃತ್ಯುಂಜಯ : ಸಾವು ಸೋಲುವ ಸಮಯ  Feb 15, 2014

ಅವಾಂತರ: ಹೃದಯವೆಂಬ ಆಲಯದೊಳಗೆ

ನಾನು ಅವಕ್ಕಾಗಿದ್ದೇ ಆವಾಗ. ರಾವ್ ಗೆ ಇದ್ದಿದ್ದು ತೀವ್ರತರವಾದ ಬಿ.ಪಿ.ಖಾಯಿಲೆ. ನಾನು ನಾಲ್ಕು ತರಹದ ಕಾಂಬಿನೇಷನ್ ಮಾತ್ರೆ ಕೊಟ್ಟ ಮೇಲೆಯೇ ನಿಯಂತ್ರಣಕ್ಕೆ ಬಂದಿದ್ದು ಈಗ ಏಕಾಏಕಿ ಔಷಧಿ ಇಲ್ಲದೆಯೇ ನಿಯಂತ್ರಣದಲ್ಲಿದೆ ಎಂದರೆ...?

ಈ ಸಂಚಿಕೆ  Feb 15, 2014

ಓದಿ ಓದಿ ಪ್ರೀತಿಸಿ

ನಾವೆಲ್ಲರೂ ಬರೆಯಬಹುದಾದ ಅತ್ಯುತ್ತಮ ಪ್ರತಿ ಎಂದರೆ ಮಕ್ಕಳಿಗೆ ಪತ್ರ. ಅಲ್ಲಿ ಮುಖ್ಯವಾಗಿ ನಾನಿರುತ್ತೇನೆ.

ಪುತ್ರಶೋಕ (ಭಾಗ-9)  Feb 15, 2014

ನ್ಯಾಯಾಲಯಗಳ ಸುತ್ತಾಟ

ನನ್ನ ಪಿಂಚಣಿ ಹಣ, ಮತ್ತು ಕೇರಳದ ನಾಗರಿಕರು ನೀಡಿದ್ದ ಹಣವೆಲ್ಲಾ ಖರ್ಚಾಗಿ ಬರಿಗೈ ದಾಸನಾಗಿದ್ದೆ. ಹಾಗಾಗಿ ಮಗನಿಗಾದ ಅನ್ಯಾಯದ ವಿರುದ್ಧದ ಹೋರಾಟವನ್ನು ಕೈ ಬಿಟ್ಟು ನೇಪಥ್ಯಕ್ಕೆ ಸರಿದುಬಿಡಬೇಕೆಂದು ನಿರ್ಧರಿಸಿದೆ.

ಮುತ್ತುರಾಜನ ಅಣಿಮುತ್ತುಗಳು  Feb 15, 2014

ರಾಜನುಡಿ

ಡಾ. ರಾಜ್ ಕುಮಾರ್ ರ ಸಿನೆಮಾಗಳಿಂದ ಆಯ್ದ ಸಂಭಾಷಣೆಗಳ ತುಣುಕುಗಳನ್ನು ಸಂಗ್ರಹಿಸಿ ಕೊಡಲಿದ್ದಾರೆ ಎಸ್. ಜಗನ್ನಾಥರಾವ್ ಬಹುಳೆ. ಈ ಸಂಭಾಷಣೆಗಳನ್ನು ಬರೆದ ಸಂಭಾಷಣೆಕಾರರಿಗೆ ವಿಶೇಷ ವಂದನೆಗಳನ್ನು ಹೇಳುತ್ತಾ ಮೊದಲ ಕಂತು ಇಲ್ಲಿದೆ.

ಗೆಸ್ಟ್ ಕಾಲಂ  Feb 15, 2014

ಬೆನ್ನ ಕೆಳಗೆ ಯಾಕೆ ಚುಳ್ ಅಂತಿದೆ? ಹಿರಿಯರೇ ಹುಷಾರು!

'ಬೆನ್ನಿನ ಕೆಳಭಾಗದಲ್ಲಿ ನೋವು ಎಂದರೆ, ಅಸ್ತಿರಜ್ಜು, ಸ್ನಾಯುರಜ್ಜು, ಸ್ನಾಯು ಅಥವಾ ಡಿಸ್ಕ್ ಗಳಿಗೆ ಹಾನಿಯುಂಟಾಗಿದೆ ಎಂದರ್ಥ. ಹೆಚ್ಚಿನ ಸಂದರ್ಭಗಳಲ್ಲಿ ತಾನೇ ಗುಣವಾಗುತ್ತದೆ. ಆದರೆ ತೀವ್ರವಾದ ಹಾಗೂ ನಿರಂತರ ಕಾಡುವ ಸಂದರ್ಭಗಳಲ್ಲಿ, ಸರಿಯಾದ ರೋಗಲಕ್ಷಣ ಪತ್ತೆ'

ಶಾಪಿಂಗ್ ಕಾಂಪ್ಲೆಕ್ಸ್  Feb 15, 2014

ರೀಟೆಲ್ ಥೆರಪಿ ಎಂಬ ಮೂಡನಂಬಿಕೆ

ಒಂದೊಂದು ಸರ್ಕಾರಿ ಯೋಜನೆಯಲ್ಲೂ ಕೋಟ್ಯಂತರ ರೂಪಾಯಿ ಕಳ್ಳ ದುಡ್ಡು ಬಾಚಿಕೊಳ್ಳುವ ಅಧಿಕಾರಿಗಳಿಗೋ ರಾಜ ಕಾರಣಿಗಳಿಗೋ ಇದರಿಂದೇನೂ ತೊಂದರೆ ಯಾವುದಿಲ್ಲ. ಆದರೆ, ಅವರನ್ನು ಅನುಕರಿಸಲು ಹೋಗುವ ಮಧ್ಯಮ ವರ್ಗದವರು ಶಾಪಿಂಗ್ ಭೂತವನ್ನು ಬೆನ್ನಿಗೆ ಕಟ್ಟಿಕೊಂಡು ಕೊನೆಗೆ ಇಳಿಸಲಾಗದೆ

ಮೀಯುವುದು  Feb 15, 2014

ಆತ್ಮಕ್ಕೊಳ್ಳೆಯದು...

ಕೆಲವು ತಿಂಗಳುಗಳ ನಂತರ, ಇಂಗ್ಲೀಷ್ ರೀತಿಯ ಸ್ನಾನ, ತಲೆಯ ಮೇಲಿಂದ ಚೊಂಬಿನಿಂದಲೋ ಇಲ್ಲವೆ ಲೋಟದಿಂದಲೋ ನೀರು ಸುರಿದುಕೊಂಡು ಸ್ವಚ್ಛವಾಗುವುದಕ್ಕಿಂತಲೂ ಉತ್ತಮವೆಂದು ಕಂಡುಕೊಂಡೆ.

ಎಲಿಜಬೆತ್ ಬ್ಯಾಥರಿ  Feb 15, 2014

ದಿ ಲೇಡಿ ಸೀರಿಯಲ್ ಕಿಲ್ಲರ್

ಗಂಡನ ಪ್ರೀತಿಯ ಆರೈಕೆಯಲ್ಲಿದ್ದ ಬ್ಯಾಥರಿಗೆ ಜಗತ್ತೆ ಸುಂದರ ಎನ್ನಿಸುತ್ತಿತ್ತು. ಬಯಸಿದ್ದೆಲ್ಲ ಕಾಲ ಕೆಳಗೆ ಸಿಕ್ಕಾಗ ಆಕೆಗೆ ಮತ್ತಷ್ಟು ಸಂತಸ. ಆದರೆ ಪತಿಯ ಪ್ರೀತಿಯ ರಶ್ಮಿಯನ್ನು ಅನುಭವಿಸುವ ಅದೃಷ್ಟ ಆಕೆಯಿಂದ ಬಹುಬೇಗ ದೂರ ಸರಿಯಿತು.

ಮಾತು ದೇವೋಭವ  Feb 15, 2014

ಸನ್ಯಾಸಿಗಳಿಗೆ ಮುತ್ತು ಮಾತ್ರ ನಿಷಿದ್ಧ!

ರಹಸ್ಯ ರತಿಕ್ರೀಡೆ ನಡೆಸುವಾಗ ಸಿಕ್ಕಿಬಿದ್ದ ಪಂಡಿತೋತ್ತಮರೊಬ್ಬರು 'ಚರ್ಮಣಾ ಚರ್ಮಸಂಯೋಗೇ ಬ್ರಹ್ಮಣಃ ಕಿಂ ಭವಿಷ್ಯತಿ' ಎಂಬ ವಿತಂಡವಾದ ಮಾಡಿದ್ದನ್ನು ಹಿಂದೆ ಓದಿದ್ದಿರಿ. ಚರ್ಮಕ್ಕೆ ಚರ್ಮ ಸೇರಿದರೆ ಬ್ರಹ್ಮಕ್ಕೇನಾಯಿತು. (ಜನಿವಾರಕ್ಕೇನು ಅಪಚಾರವಾಯಿತು) ಎಂದು ಆ ಮಹಾನುಭಾವ ಕೇಳಿದ್ದರು.